Tuesday, July 25, 2017
ramanatha-rai-lokasabe
2018ರ ವಿಧಾನಸಭೆ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ರಮಾನಾಥ ರೈ ಕೊನೆಯದಾಗಿ ಸ್ಪರ್ಧಿಸಲಿದ್ದಾರೆ. ಅದಾದ ವರ್ಷದ ಬಳಿಕ ಬರಲಿರುವ ಲೋಕಸಭೆಯಲ್ಲಿ ರಮಾನಾಥ ರೈ ಸ್ಪರ್ಧಿಸಲಿದ್ದಾರೆ ಅನ್ನುತ್ತಿದೆ ಕಾಂಗ್ರೆಸ್ ಪಡಸಾಲೆ. ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ವೇಣುಗೋಪಾಲ್ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸೈನ್ಯವನ್ನು ಕಟ್ಟುತ್ತಿರುವ ಜೊತೆಗೆ ಲೋಕಸಭೆ ಚುನಾವಣೆಗೂ ಸದ್ದಿಲ್ಲದೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಲೋಕಸಭೆಗಾಗಿ ಗೆಲ್ಲುವ ಕುದುರೆಗಾಗಿ ಹುಡುಕಾಡುತ್ತಿರುವ ವೇಣುಗೋಪಾಲ್ ಮಂಗಳೂರು ಕ್ಷೇತ್ರದಿಂದ ರೈಗಳ ಹೆಸರನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಮಂಗಳೂರು ಕ್ಷೇತ್ರದಿಂದ ಲೋಕಸಭೆ ಸ್ಪರ್ಧಿಸಬಲ್ಲ ಸೂಕ್ತ ಅಭ್ಯರ್ಥಿಗಳು ಇಲ್ಲದೇ ಇರುವ ಕಾರಣದಿಂದ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಿತ್ತು. ಜನಾರ್ಧನ ಪೂಜಾರಿ, ವೀರಪ್ಪ...